/newsfirstlive-kannada/media/post_attachments/wp-content/uploads/2024/07/Gambhir_Surya_Hardik.jpg)
ಜಿಂಬಾಬ್ವೆ ಕ್ರಿಕೆಟ್ ತಂಡದ ವಿರುದ್ಧ ನಡೆದ ಟಿ20 ಸರಣಿಯಲ್ಲಿ 4-1 ಅಂತರದಿಂದ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ ಟಿ20 ವಿಶ್ವಕಪ್ ಚಾಂಪಿಯನ್ ಆಗಿರೋ ಟೀಮ್ ಇಂಡಿಯಾ ಮತ್ತೊಂದು ಸರಣಿ ಗೆದ್ದಿದೆ. ಈ ಬೆನ್ನಲ್ಲೇ ಶ್ರೀಲಂಕಾ ವಿರುದ್ಧ ಜೂನ್ 27ನೇ ತಾರೀಕಿನಿಂದ 3 ಟಿ20 ಪಂದ್ಯ ಮತ್ತು 3 ಏಕದಿನ ಪಂದ್ಯಗಳ ಸರಣಿ ಶುರುವಾಗಲಿದೆ. ಇದಕ್ಕಾಗಿ ಈಗಾಗಲೇ ಬಿಸಿಸಿಐ ಬಲಿಷ್ಠ ಟೀಮ್ ಇಂಡಿಯಾ ಅನೌನ್ಸ್ ಮಾಡಿದೆ.
Ajit Agarkar on Suryakumar Yadav in ODIs :
" He is permanently dropped from ODIs and we didn't even discuss him as Shreyas & KL is back and they had terrific ODI WC, Pant is also back. So, yeah Sky is a T2OI player and we have so much quality in ODIs. pic.twitter.com/zWTzjvjwXO
— Rajiv (@Rajiv1841)
Ajit Agarkar on Suryakumar Yadav in ODIs :
" He is permanently dropped from ODIs and we didn't even discuss him as Shreyas & KL is back and they had terrific ODI WC, Pant is also back. So, yeah Sky is a T2OI player and we have so much quality in ODIs. pic.twitter.com/zWTzjvjwXO— Rajiv (@Rajiv1841) July 22, 2024
">July 22, 2024
ರಾಹುಲ್ ದ್ರಾವಿಡ್ ನಿರ್ಗಮನದ ನಂತರ ಬಿಸಿಸಿಐ ಟೀಮ್ ಇಂಡಿಯಾಗೆ ಹೊಸ ಮುಖ್ಯ ಕೋಚ್ ಆಯ್ಕೆ ಮಾಡಿದೆ. ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆ ಆಗಿದ್ದಾರೆ. ವಿಶ್ವಕಪ್ ಗೆದ್ದ ಕೂಡಲೇ ಕ್ಯಾಪ್ಟನ್ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. ಹಾಗಾಗಿ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾಗೆ ಹೊಸ ಕ್ಯಾಪ್ಟನ್ ಬೇಕಿತ್ತು. ಭಾರತ ಟಿ20 ಕ್ರಿಕೆಟ್ ತಂಡದ ಕ್ಯಾಪ್ಟನ್ ರೇಸ್ನಲ್ಲಿ ಹಾರ್ದಿಕ್ ಪಾಂಡ್ಯ ಹೆಸರು ಕೇಳಿ ಬಂದಿತ್ತು. ಬಳಿಕ ಕ್ಯಾಪ್ಟನ್ ಆಗಬೇಕಿದ್ದ ಹಾರ್ದಿಕ್ಗೆ ಗೌತಮ್ ಗಂಭೀರ್ ಬಿಗ್ ಶಾಕ್ ಕೊಟ್ಟಿದ್ರು.
ಕೋಚ್ ಗೌತಮ್ ಗಂಭೀರ್ ಹಾರ್ದಿಕ್ ಪಾಂಡ್ಯ ಬದಲಿಗೆ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಭಾರತ ಟಿ20 ತಂಡದ ಕ್ಯಾಪ್ಟನ್ ಆಗಲಿ ಎಂದು ಸೆಲೆಕ್ಷನ್ ಕಮಿಟಿ ಮುಂದೆ ಪ್ರಪೋಸಲ್ ಇಟ್ಟಿದ್ದರು. ಯಾವುದೇ ಕಾರಣಕ್ಕೂ ಹಾರ್ದಿಕ್ ಪಾಂಡ್ಯ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ಆಗೋದು ಬೇಡ. ಇವರ ಬದಲಿಗೆ ಸೂರ್ಯ ಭಾರತ ತಂಡವನ್ನು ಮುನ್ನಡೆಸಲಿ ಎಂದಿದ್ದರು. ಅದರಂತೆಯೇ ಟೀಮ್ ಇಂಡಿಯಾ ಟಿ20 ಕ್ಯಾಪ್ಟನ್ ಆಗಿ ಸೂರ್ಯ ಆಯ್ಕೆಯಾಗಿದ್ದು, ಉಪ ನಾಯಕರಾಗಿ ಗಿಲ್ ಆಯ್ಕೆಯಾಗಿದ್ದಾರೆ.
ಹಾರ್ದಿಕ್ ಬೆನ್ನಲ್ಲೇ ಸೂರ್ಯಗೂ ದೊಡ್ಡ ಆಘಾತ!
ಇನ್ನು, ಭಾರತ ಟಿ20 ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿರೋ ಸೂರ್ಯಕುಮಾರ್ ಯಾದವ್ಗೆ ಕೋಚ್ ಗಂಭೀರ್ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಏಕದಿನ ಮಾದರಿಯಿಂದಲೇ ಸೂರ್ಯ ಅವರನ್ನು ಪರ್ಮನೆಂಟ್ ಆಗಿ ಕೈ ಬಿಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ನಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ